Thursday, October 29, 2009

ಅವಳ ಹೆಸರು

ಅಗ್ನಿಯೂ ಸುಟ್ಟುಹೋಗುವ ಕೋಪ
ಧರಿತ್ರಿಗೂ ಮೀರಿದ ಮೌನ
ಕೊಂಡು ತಂದವಳು
ನನ್ನ ಉಸಿರು
ಗೆಳತಿ ಅವಳ ಹೆಸರು

ಹೂವನು ಮೀರಿದ ಕಂಪು
ಇವಳು ಮಂಜಿಗಿಂತ ತಂಪು
ನನ್ನೆದೆಯ ಮಡುವಿನ ಕಮಲ
ಅರಳಿದಳು ಸೋಕಿಸದೆ ಕೆಸರು
ಮಡದಿ ಅವಳ ಹೆಸರು

ದೀಪದಾರತಿಯ ಬೆಳಕು
ಕಾರಿರುಳ ಕಳೆವ ಹೊಳಪು
ಹೊತ್ತು ಬರುವವಳ
ಮನ ಹಸಿರು
ಹೆಣ್ಣು ಅವಳ ಹೆಸರು

ತೊಡೆದು ಪುರುಷನ ವಿಕೃತಿ
ಕಲಿಸಿ ಬಾಳಿಗೆ ಸಂಸ್ಕೃತಿ
ಸಲಹುವವಳ
ಬದುಕು ಕೆನೆ ಮೊಸರು
ಪ್ರಕೃತಿ ಅವಳ ಹೆಸರು...

2 comments:

ಅಂತರ್ವಾಣಿ said...

ಮಧು,

ತುಂಬಾ ಚೆನ್ನಾಗಿದೆ ಈ ಕವಿತ. ಹೆಣ್ಣು ಯಾವ ಯಾವ ರೀತಿ ಇರುತ್ತಾಳೆ ಎಂಬುದನ್ನು ಚೆನ್ನಾಗಿ ಬರೆದಿದ್ದೀರ.

maddy said...

Thank you Jay :)