Monday, June 02, 2008

ನೀ ನನ್ನ ಪಾಲಿಗೆ

ಈ ಹೃದಯ ಪಿಸುಗುಟ್ಟಲು
ಮೌನ ಮಾತಾಯಿತು
ನಿನ್ನ ನೆನಪು ಮನ ಸೇರಲು
ದುಃಖ ಬರಿದಾಯಿತು

ನಿನ್ನ ಕಾಣುವ ಹಂಬಲಕೆ
ಹಗಲು ಹರಿಸಿತು ಸೆಳೆಮಿಂಚು
ನಿನ್ನ ಸೆಳೆವ ಉಪಾಯಕೆ
ಕತ್ತಲು ಕಟ್ಟಿತು ಒಳಸಂಚು

ಸುಳಿಯು ಸುಳಿದಾಡದು
ನೀ ನಿಂತ ಮನದ ಮಡುವಲ್ಲಿ
ಅಳಿವಿಲ್ಲ ನನಗೆ ಇದ್ದಷ್ಟು ದಿನ
ನಿನ್ನಾಸರೆಯ ಮಡಿಲಲ್ಲಿ

ನಲುಮೆಯ ಬದುಕಿದು ಒಗಟು
ಬಿಡಿಸು ಬಾ ಈ ಕಗ್ಗಂಟು
ಕಾರಿರುಳ ಕಾನನವು ಕತ್ತಲ ಕೂಪ
ಬೆಳಗಿಸೆ ಇರುಳ ಹೊತ್ತಿಸು ಒಲವಿನ ದೀಪ

ನಸುಗಂಪು ಹೂ ಸೂಸಿದೆ
ಈ ಕಲ್ಪನೆಯೇ ಹೊಸದಾಗಿದೆ
ಪ್ರತೀ ಕಲ್ಪನೆ ನಿನ್ನ ನೆನಪಂತಿದೆ
ಆ ನೆನಪೇ ಹಸಿರಾಗಿದೆ

ದಾಟಿ ಬಾ ಸಪ್ತ ಶರಧಿಗಳ
ಮೀಟಿ ಬಾ ಸುಪ್ತ ಭಾವಗಳ
ಕನಸು ನನಸಾಗುವ ಘಳಿಗೆಗೆ
ಸೇರಿ ಬಿಡು ನೀ ನನ್ನ ಪಾಲಿಗೆ

5 comments:

ಅಂತರ್ವಾಣಿ said...

ಏನು ಮಧು,

ಕೆಲಸದ ನಡುವೆ ಇಷ್ಟು ಅದ್ಭುತವಾಗಿ ಬರೆಯಲು ಸಾಧ್ಯವಾಯಿತಾ? ಅಥವ ಕೆಲಸಕ್ಕೆ ರಜೆ ಹಾಕಿದ್ದೀರ?

maddy said...

raje enu illa.. haage...kelsad madhye ne barde jay :)
hmmm tumba dina agiddu kavana bardu!!

Thanks!

ದೀಪಕ್ ಸಿದ್ದನಂಜ (Deepak Siddananja) said...

namskara madhu, nanna blog ge bheti kottu salehege kottidakke naa thumba aabhari... thamma kavanagalu bahala chennagide... nimma ee olleya kelasa munduvaresi... matte sigona...

nimma vishvaasi
deepak

ಸುಧೇಶ್ ಶೆಟ್ಟಿ said...

ಪ್ರತಿ ಸಾರಿ ನಿಮ್ಮ ಬ್ಲಾಗಿಗೆ ಬ೦ದಾಗ ಹೊಸದೊ೦ದು ಕವನ ಇದ್ದೇ ಇರುತ್ತದೆ. ನಿಮ್ಮ ಕವನಗಳಲ್ಲಿನ ಪ್ರಾಸ ನನಗೆ ತು೦ಬಾ ಇಷ್ಟ. ನನಗೆ ಪ್ರಾಸ ಉಪಯೋಗಿಸಿ ಕವನ ಬರೆಯಲು ಸಾಧ್ಯ ಆಗಿಲ್ಲ. ನೀವು ಎಷ್ಟು ಸಲೀಸಾಗಿ ಬರೆಯುತ್ತೀರಾ… ಹೀಗೆ ಬರೆಯುತ್ತಿರಿ..

maddy said...

dhanyavaadagalu sudesh...

prasa illadeyu uttama kavana bareyalu sadhyavide...
adu kooda ondu kale.. adu nimmalide...