Saturday, March 01, 2008

ನಾನು-ನೀನು

ನೆನಪಿನ ಪುಟದ

ಬಿಳಿ ಹಾಳೆಯಲ್ಲಿ

ಹೊಸ ಚಿತ್ರ ನೀನು

ಹಳೆಯ ಬಣ್ಣ ನಾನು


ದೂರದಾಚೆಯ ಕಾನನದ

ಮಡಿಲಲ್ಲಿ

ನಿತ್ಯ ಹಸಿರು ನಿನ್ನದು

ಅಲ್ಲಿರುವ ಉಸಿರು ನನ್ನದು

.
ಸವಿ ಜೇನ ಕೊಳದ

ನಡುವಿನಲ್ಲಿ

ಅರಳಿದ ನೈದಿಲೆ ನಿನ್ನ ಕಂಗಳು

ನಾನು ಅರಳಿಸುವ ಬೆಳದಿಂಗಳು

.

ಕನಸಿನ ಲೋಕದ

ಹೂದೋಟದಲ್ಲಿ

ಕೆಂಪು ಗುಲಾಬಿಯು ನಿನ್ನಧರ

ನಾನದರ ಭ್ರಮರ

4 comments:

Anonymous said...

Woahhhhhh Madhu.... Kavana tumba chennagide. Inthahade Kavanagala Haniyannu namma mele chimukisuthiri....

maddy said...

thanks ri...
:)

ಅಂತರ್ವಾಣಿ said...

ಮಧು,
ತುಂಬಾ ಚೆನ್ನಾಗಿದೆ.
ಗಂಡನ್ನು ಬೆಳದಿಂಗಳಿಗೆ ಹೋಲಿಸಿದವರು ನೀವೊಬ್ಬರೇ ಅನ್ನಿಸುತ್ತೆ. :-)

maddy said...

thank you jay.. :)