Thursday, May 17, 2007

ಲಿಲ್ಲಿ

ಪ್ರತಿಯೊಬ್ಬರ ಮಾನಸ ಸರೋವರದಲ್ಲಿ
ಮೂಡುವ ನೈದಿಲೆ ಯಂತೆ ಇರುವರು ಲಿಲ್ಲಿ
ಎಂದೆಂದೂ ಇರುವರು ನೆನೆದವರ ಮನದಲ್ಲಿ


ಈ ಹಿಂದೆ ಸಾವಿರಾರು ವಿದ್ಯಾರ್ಥಿ ಗಳಿಗೆ ಕಲಿಸಿದರು ವಿದ್ಯೆ
ಈಗ ಈ ತಾಣದಲ್ಲಿ ಕಲಿಸುತಿಹರು ಎಲ್ಲರಿಗೂ
ಬದುಕುವ ವಿದ್ಯೆ ಇದ್ದುಕೊಂಡು ನಮ್ಮೆಲ್ಲರ ಮಧ್ಯೆ


ಇದ್ದರೂ ಸಾಗರದಾಚೆಯ ದೂರದ ನಾಡಿನಲ್ಲಿ
ಇವರ ಮನಸ್ಸೆಂದೆಂದೂ ಇರುವುದು ಈ ಗಂಧದನಾಡಿನಲ್ಲಿ
ತಾವು ಎಲ್ಲೇ ಇದ್ದರೂ ಅವರ ಹೃದಯ ಮಿಡಿವುದು ತವರಿನಲ್ಲಿ
ಶರೀರ ಅಲ್ಲಿದ್ದರೂ ಅವರ ಶಾರೀರ ಪ್ರತಿಧ್ವನಿಸುವುದು ಕನ್ನಡಿಗರು ತಾಣದಲ್ಲಿ

ಇಗೋ ನಾವೆಲ್ಲಾ ಕೋರುತಿರುವೆವು ಲಿಲ್ಲಿ
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯವನ್ನು
ಹೀಗೇ ನಗುತಿರಿ ಎಂದೆಂದೂ ನೈದಿಲೆಯ ನಗು ಚೆಲ್ಲಿ!

1 comment:

Anonymous said...

ಲಿಲ್ಲಿ ಅವರ ಬಗ್ಗೆ ಪದ್ಯ ತುಂಬಾ ಚೆನ್ನಾಗಿ ಬರೆದಿದ್ದೀರ ಮಧು! ಹೌದಲ್ವಾ ಅವರು ಇರುವುದೇ ಹಾಗೆ! ಮತ್ತೊಮ್ಮೆ ಧನ್ಯವಾದಗಳು. ಅಂದ ಹಾಗೆ ಲಿಲ್ಲೀ ಎಲ್ಲಿದ್ದೀರಾ??!!!

- NilGiri